Sai Angels Education Society : Chikmagalur best school, Top CBSE School in Chikmagalur,Best Boarding School in Chikmagalur, Best PU college in chikmagalur, Top PU college in chikmagalur, best primary school in chikmagalur, best campus in Chikmagalur
Divine grace of Sadguru has given Sri Sai angels gurukula to all of us.
Undoubtedly, this is the place where all our endeavours and efforts will take an exquisite shape.
Days have gone where academics were only based on PU board results. Now we need to compete with the whole state or nation go get into our field of interest. Each day is a sadhana to get to our dreams & we will need the right guidance. May all the students shine and serve the society in the best possible way. M.J.Karthik BE.,MBA - Joint Secretary
ನಹಿ ಜ್ಞಾನೇನಸದೃಶಂ' ಎಂಬ ಉಕ್ತಿಯಂತೆ ಜ್ಞಾನಕ್ಕಿಂತ ಮಿಗಿಲಾದ ಇನ್ನೊಂದು ವಸ್ತು ಈ ಪ್ರಪಂಚದಲ್ಲಿ ಇಲ್ಲ.
ನಮ್ಮ ಪುರಾಣ ಇತಿಹಾಸಗಳೂ ಸಹ ಇದನ್ನು ಎತ್ತಿ ಹಿಡಿದಿವೆ. ಹಿಂದೆ ಈ ಜ್ಞಾನದಾಹವನ್ನು ನಮ್ಮ ಗುರುಕುಲಗಳು ನೀಗಿಸುತ್ತಿದ್ದವು. ನಾಗರೀಕ ಸಮಾಜ ಮುಂದುವರೆದಂತೆಲ್ಲಾ ಇಂದು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಸಮಾಜದಲ್ಲಿ ಏನೇ ಉತ್ತಮ ಸುಧಾರಣೆಗಳಾಗಬೇಕಾಗಿದ್ದರೂ ಅದು ಶಿಕ್ಷಣದಿಂದ ಮಾತ್ರ ಸಾಧ್ಯ.
ಮೂರು ವರ್ಷದಲ್ಲಿ ಕಲಿತ ಬುದ್ಧಿ ನೂರು ವರ್ಷದವರೆಗೆ ಮತ್ತು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ಭವಿಷ್ಯದ ಭದ್ರಬುನಾದಿ ಇದ್ದಂತೆ ಎಂಬುದನ್ನು ಮನಗಂಡ ಶ್ರೀ ಸಾಯಿ ಏಂಜೆಲ್ಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುವ ಶ್ರೀ. ಶ್ರೀನಾಗೇಶ್ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ. ವಿಜಯಾ ನಾಗೇಶ್ ಕೇವಲ 15 ಮಕ್ಕಳೊಂದಿಗೆ ತಮ್ಮ ಮನೆಯಲ್ಲಿಯೇ ಬಾಲವಾಡಿಯನ್ನು ಪ್ರಾರಂಭಿಸಿದರು. ದಂಪತಿಗಳ ಉತ್ಸಾಹ ಮತ್ತು ಆಸಕ್ತಿಯಿಂದ ಇಂದು ಸುಮಾರು 1500 ವಿದ್ಯಾರ್ಥಿಗಳು ಸಂಸ್ಥೆಯ ಅಡಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಈ ಎರಡು ದಶಕಗಳ ಅವಧಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಭಾರತೀಯ ಸಂಸೃತಿಯನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸಿಕೊಳ್ಳಲು ಪೂರಕ ವಾತಾವರಣವನ್ನು ನಿರ್ಮಿಸಿ ಜಿಲ್ಲೆಯಲ್ಲಿಯೇ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಶಿಕ್ಷಣಕ್ಕೆ ಬೇಕಾದ ಎಲ್ಲಾ ಪೂರಕ ಪರಿಸರದೊಂದಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಹಚ್ಚ ಹಸಿರಿನ ವಾತಾವರಣದಲ್ಲಿ ಶಿಸ್ತು, ಸ್ವಯಂಶಿಸ್ತು, ಗುರಿಮುಟ್ಟುವ ತವಕ, ದೃಢನಿಶ್ಚಯ, ಕ್ಷೇತ್ರ ನಿರ್ಣಯ, ಛಲಸಾಧನೆಯ ಗುರಿಯನ್ನು ವಿದ್ಯಾರ್ಥಿಗಳ ಮನಸ್ಸಿನ ಪಟಲದಲ್ಲಿ ಮೂಡಿಸುವ ಉದ್ದೇಶದಿಂದ ಅರ್ಪಣಾಭಾವನೆ, ವೃತ್ತಿಪರತೆಯ ಶಿಕ್ಷಣ ನೀಡಬೇಕೆಂಬ ಕನಸಿನೊಂದಿಗೆ 2007ರಲ್ಲಿ ಶ್ರೀ ಸಾಯಿ ಏಂಜೆಲ್ಸ್ ಪದವಿಪೂರ್ವ ಕಾಲೇಜು ಜನ್ಮ ತಾಳಿತು. ಪಿ.ಯು.ಸಿ. ಮೊದಲ ಬ್ಯಾಚ್ನಲ್ಲಿಯೇ ವಿಜ್ಞಾನ ವಿಭಾಗದಲ್ಲಿ ಶೇಕಡ 100ಕ್ಕೆ 100 ಫಲಿತಾಂಶವನ್ನು ತಂದುಕೊಡುವುದರ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಹೊಸ ಇತಿಹಾಸವನ್ನು ನಿರ್ಮಿಸಿತು. ಅಲ್ಲಿಂದ ಇಲ್ಲಿಯವರೆಗೂ ನೂರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ, ವಾಸ್ತುಶಿಲ್ಪ, ಮೂಲವಿಜ್ಞಾನ ಮತ್ತು ಇನ್ನಿತರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಮೂಲಕ ಶಿಕ್ಷಣ ಇತಿಹಾಸದಲ್ಲೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.
ಶ್ರೀ ಸಾಯಿ ಏಂಜೆಲ್ಸ್ ಪದವಿಪೂರ್ವ ಕಾಲೇಜನ್ನು ಶ್ರೀ ಸಾಯಿ ಏಂಜೆಲ್ಸ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಮುನ್ನಡೆಸುತ್ತಿದೆ. ಭಾರತೀಯ ಸಂಸ್ಕೃತಿ, ಆಚಾರ, ವಿಚಾರ, ಪ್ರಾರ್ಥನೆ, ಧ್ಯಾನಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಸಹ ವಾತಾವರಣ ಕಲ್ಪಿಸಲಾಗಿದೆ.
ವಿಶಾಲವಾದ ಕ್ಯಾಂಪಸಿನೊಳಗೆ ವಿಶಾಲವಾದ ಕೊಠಡಿ, ಎಲ್.ಸಿ.ಡಿ., ಧ್ವನಿ, ದೃಶ್ಯ, ಸಂವಹನ, ಸಲಕರಣೆ, ಉತ್ತಮ ದರ್ಜೆಯ ಪಾಠೋಪಕರಣ, ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ, ಜೀವನ ಕೌಶಲ್ಯಗಳನ್ನು ತಿಳಿಸುವ ಶಿಕ್ಷಣವನ್ನು ನೀಡಲಾಗುತ್ತದೆ.
ಚಿಕ್ಕಮಗಳೂರಿನಿಂದ 8 ಕಿ.ಮೀ. ದೂರದಲ್ಲಿ ಸಿದ್ಧಾಂತ ಮತ್ತು ಪ್ರಾಯೋಗಿಕ ಜ್ಞಾನವನ್ನು ಧಾರೆ ಎರೆಯಬಲ್ಲ ಅನುಭವಿ ಪಾಂಡಿತ್ಯಪೂರ್ಣ ವಿಜ್ಞಾನ ವಿಭಾಗದ ಪ್ರಾಧ್ಯಾಪಕವರ್ಗ, ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿನ ಬಗ್ಗೆ ವಿಶೇಷ ತರಬೇತಿ, ಅ.ಇ.ಖಿ, ತರಬೇತಿ, ಹಾಗೂ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ಇವೆಲ್ಲವನ್ನೂ ಮೈಗೂಡಿಸಿಕೊಂಡು ಸಂಸ್ಥೆ ಮುಂದುವರೆಯುತ್ತಿದೆ. ಇವೆಲ್ಲಾ ಸಾಧನೆಗಳ ಹಿಂದೆ ಆಡಳಿತಮಂಡಳಿಯ ಶ್ರಮ, ವಿದ್ಯಾರ್ಥಿಗಳ ಪೂರ್ಣಮನಸ್ಸಿನ ಪ್ರಯತ್ನ ಸೇರಿದೆ ಎಂದರೆ ಅತಿಶಯೋಕ್ತಿಯಾಗಲಾರದು.